ತರುಣ್ ಸುಧೀರ್ ಕೈ ಹಿಡಿಯುತ್ತಿರುವ ಖುಷಿಯಲ್ಲಿ ಸೋನಾಲ್ ಸೂಪರ್ ಪಾರ್ಟಿ…!

Spread the love

ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಇಂಥ ಪ್ರೀತಿ ಅನ್ನೋದು ಹೇಗೆ ಎಲ್ಲಿ ಯಾವಾಗ ಹುಟ್ಟುತ್ತೆ ಅನ್ನೋದು ಯಾರಿಗೂ ಗೊತ್ತಿರಲ್ಲ. ಇದಕ್ಕೆ ತರುಣ್ ಸುಧೀರ್ ಮತ್ತು ಸೋನಾಲ್ ಮಂಥೆರೊ ಅತ್ಯುತ್ತಮ ಉದಾಹರಣೆ.
ಹೌದು, ಧರ್ಮಕ್ಕಿಂತ ಪ್ರೀತಿ ದೊಡ್ಡದು ಎಂದು ಸಾರಿರುವ ತರುಣ್ ಸುಧೀರ್ ಮತ್ತು ಸೋನಾಲ್, ಈ ಆಗಸ್ಟ್ 10 ಮತ್ತು 11ರಂದು ಹೊಸ ಬದುಕಿಗೆ ಕಾಲಿಡಲಿದ್ದಾರೆ. ಬೆಂಗಳೂರಿನ ಕೆಂಗೇರಿ ಬಳಿಯ ಹಾಲ್​ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಂಥೆರೊ ವಿವಾಹವಾಗಲಿದ್ದಾರೆ. ಈ ಹಿನ್ನೆಲೆ ಬ್ಯಾಚುಲರ್ ಪಾರ್ಟಿ ಮಾಡಿ ಸೋನಾಲ್ ಸಂಭ್ರಮ ಪಟ್ಟಿದ್ದಾರೆ.ಹೌದು, ಇನ್ನೇನು ಹೆತ್ತವ್ವನ ಮನೆ ತೊರೆದು ಗಂಡನ ಮನೆಗೆ ಹೊರಡಲು ಅಣಿಯಾದ ಸೋನಾಲ್‌ಗೆ ಅವರ ತಾಯಿ ಮತ್ತು ತಂಗಿ ಸೋನಾಲ್‌ಗೆ ಕಣ್ಣಿಗೆ ಬಟ್ಟೆ ಕಟ್ಟಿ ರೆಸಾರ್ಟ್‌ವೊಂದಕ್ಕೆ ಕರೆದೊಯ್ದಿದ್ದಾರೆ. ಈ ಮೂಲಕ ಸರ್‌ಫ್ರೈಸ್ ನೀಡಿದ್ದಾರೆ. ಆ ನಂತರ ಅಮ್ಮ ಮತ್ತು ತಂಗಿ ಹಾಗೂ ಸ್ನೇಹಿತರ ಜೊತೆ ಸೋನಾಲ್ ಪಾರ್ಟಿ ಮಾಡಿದ್ದಾರೆ. ಖುಷಿ ಖುಷಿಯಾಗಿ ಕ್ಷಣಗಳನ್ನೂ ಕಳೆದಿದ್ದಾರೆ.

Leave a Reply

Your email address will not be published. Required fields are marked *