ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ Actor Yash, ರಾಧಿಕಾ ಭೇಟಿ; ಹರಕೆ ಅರ್ಪಣೆ

Spread the love

ಬೆಳ್ತಂಗಡಿ: ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರು ಕುಟುಂಬ ಸಮೇತರಾಗಿ ಮಂಗಳವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ನಟ ಯಶ್ ಮತ್ತು ನಟಿ ರಾಧಿಕಾ ಅವರು ಮಂಗಳವಾರ ಬೆಳ್ತಂಗಡಿ ತಾಲೂಕಿನಲ್ಲಿರುವ ಮಣ್ಣಿನ ಹರಕೆಯಿಂದ ಪ್ರಸಿದ್ಧಿ ಪಡೆದಿರುವ ಸುರ್ಯ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ‌ ನೀಡಿ ಹರಕೆ ತೀರಿಸಿದರು. ಸಿನೆಮಾದ ಸಕ್ಸಸ್ ಗಾಗಿ ಭೇಟಿ ನೀಡಿದ್ದ ಅವರು ಪತ್ನಿ ರಾಧಿಕಾ ಪಂಡಿತ್, ಮಕ್ಕಳೊಂದಿಗೆ ಬಂದು ದೇವರಿಗೆ ಕುಟುಂಬ ಹಾಗೂ ಸಿನೆಮಾ ರೀಲ್ ನ ಮಣ್ಣಿನ ಹರಕೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.ಈ ವೇಳೆ ದೇವಸ್ಥಾನದ ಆನುವಂಶಿಕ ಆಡಳಿತ ಮುಖ್ಯಸ್ಥರಾದ ಡಾ.ಸತೀಶ್ಚಂದ್ರ ಅವರು ದಂಪತಿಗಳನ್ನು ಕ್ಷೇತ್ರದ ವತಿಯಿಂದ ಗೌರವಿಸಿದರು. ಯಶ್ ಜೊತೆ ಪತ್ನಿ ರಾಧಿಕಾ ಪಂಡಿತ್. ಮಕ್ಕಳಾದ ಐರಾ ಹಾಗೂ ಯಥರ್ವ್ ಇದ್ದರು. ಟಾಕ್ಸಿಕ್ ಚಲನಚಿತ್ರದ ನಿರ್ಮಾಪಕ ವೆಂಕಟ್ ಜೊತೆಗಿದ್ದರು.ಬಳಿಕ ದಂಪತಿಗಳು ನೇರವಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆಯಲು ತೆರಳಿದ್ದು, ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ನೇರವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು ಎನ್ನಲಾಗಿದೆ.

Leave a Reply

Your email address will not be published. Required fields are marked *