ಸೆಟ್ ನಲ್ಲಿ ನನ್ನನ್ನು ಅಮ್ಮ ಎನ್ನುತ್ತಿದ್ದರು, ದರ್ಶನ್ ನಿಜಕ್ಕೂ ಜಂಟಲ್ ಮ್ಯಾನ್; ನಾನು ಮತ್ತು ಆರಾಧನಾ ಅವರಿಗೆ ಚಿರಋಣಿ: ಮಾಲಾಶ್ರೀ

Spread the love

ಬೆಂಗಳೂರು: ನನಗೆ ಗೊತ್ತಿರುವ ಹಾಗೆ ದರ್ಶನ್​ ಅವರದ್ದು ಒಳ್ಳೆಯ ವ್ಯಕ್ತಿತ್ವ. ಅವರೊಬ್ಬ ಜೆಂಟಲ್​ ಮ್ಯಾನ್, ದರ್ಶನ್ ಅವರು ಕಾಟೇರ ಚಿತ್ರದ ಮೂಲಕ ನನ್ನ ಮಗಳನ್ನು ಇಂಡಸ್ಟ್ರಿಗೆ ಪರಿಚಯಿಸಿದರು. ಇದಕ್ಕೆ ನಾನು ನನ್ನ ಮಗಳು ಆರಾಧನ ಅವರಿಗೆ ಚಿರಋಣಿಯಾಗಿ ಇರುತ್ತೀವಿ ಎಂದು ನಟಿ ಮಾಲಾಶ್ರೀ ದರ್ಶನ್ ಪರ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಮು ಅವರ ಕಲಾಸಿಪಾಳ್ಯ ಸಿನಿಮಾದಿಂದ ನನಗೆ ದರ್ಶನ್‌ ಗೊತ್ತು. ಅವರು ಜಂಟಲ್‌ಮೆನ್‌, ತುಂಬಾ ವಿನಯ, ವಿನಮ್ರವಾಗಿರುವವರು. ಕಲಾಸಿಪಾಳ್ಯದಲ್ಲಿ ಹೇಗೆ ನೋಡಿದ್ದೇನೋ ಅದೇ ರೀತಿ ಕಾಟೇರ ಸಮಯದಲ್ಲೂ ನಾನು ನೋಡಿದ್ದೇನೆ. ಯಾವುದೇ ಬದಲಾವಣೆ ಇರಲಿಲ್ಲ, ಅವರ ಕಾಳಜಿ, ಅವರು ನೀಡುವ ಗೌರವ ಎಲ್ಲಾ ಹಾಗೇ ಇದೆ’ ಎಂದರು. ದರ್ಶನ್​ ನಮ್ಮನ್ನು ಕಾಟೇರ ಸೆಟ್​ ನಲ್ಲಿ ನೋಡಿಕೊಳ್ಳುತ್ತಿದ್ದ ರೀತಿ, ಅವರು ನಮಗೆ ತೋರಿಸುತ್ತಿದ್ದ ಪ್ರೀತಿ ನಿಜಕ್ಕೂ ಆರಾಧನ ಅವರ ಮೂಲಕ ಬಂದಿದ್ದು ನಮಗೆ ಖುಷಿ ಆಗುತ್ತೆ. ನಾವು ನೋಡಿದ ದರ್ಶನ ಬೇರೆ ಅವರ ಪ್ರೀತಿ ಅಂಥದ್ದು.ಸೆಟ್​ಗೆ ಹೋದಾಗ ನನ್ನನ್ನೂ ಅಮ್ಮ ಅಂತ ಮಾತನಾಡಿಸುತ್ತಿದ್ದರು.

ಈಗ ನಡೆದಿರುವ ಘಟನೆ ಬಗ್ಗೆ ನಿಜಕ್ಕೂ ನನಗೆ ಏನ್ ಮಾತಾಡಬೇಕು ಎಂದು ಗೊತ್ತಾಗುತ್ತಿಲ್ಲ. ನಾನು ನ್ಯಾಯ ಮತ್ತು ದೇವರನ್ನ ನಂಬುತ್ತೇನೆ. ಅವರಿಗೆ ನಿಜಕ್ಕೂ ಒಳ್ಳೆಯದಾಗುತ್ತೆ. ವಿಜಯಲಕ್ಷ್ಮೀ ನಿಜಕ್ಕೂ ಸ್ಟ್ರಾಂಗ್ ವುಮೆನ್​ ಅವರ ಜೀವನದಲ್ಲಿ ಸಾಕಷ್ಟು ಏಳು- ಬೀಳು ನೋಡಿದ್ದಾರೆ. ಅವರಿಗೂ ಒಳ್ಳೆಯದಾಗುತ್ತೆ. ದರ್ಶನ್​ ದುಡುಕಿನಿಂದ ಈ ಪ್ರಕರಣ ಆಯ್ತಾ ಎಂಬುದಕ್ಕೆ ನನ್ನ ಬಳಿ ಉತ್ತರ ಇಲ್ಲ. ನನಗೆ ಗೊತ್ತಿರುವ ದರ್ಶನ್​ ಅವರ ಸ್ವಭಾವವೇ ಬೇರೆ. ಅಭಿಮಾನಿಗಳು ದರ್ಶನ್​ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಾರೋ ನಾನು ಮತ್ತು ಆರಾಧನಾ ಕೂಡ ಅಷ್ಟೇ ಪ್ರೀತಿ-ಅಭಿಮಾನ ಇಟ್ಟುಕೊಂಡಿದ್ದೇವೆ. ಅದರಲ್ಲಿ ಅನುಮಾನವೇ ಇಲ್ಲ ಎಂದು ನಟಿ ಮಾಲಾಶ್ರೀ ರೇಣುಕಸ್ವಾಮಿ ಹತ್ಯೆ ಪ್ರಕರಣದ ಕುರಿತು ಮಾತನಾಡಿದ್ದಾರೆ.

ದರ್ಶನ್, ಮಾಲಾಶ್ರೀ ಮತ್ತು ಆರಾಧನಾ

Leave a Reply

Your email address will not be published. Required fields are marked *