ಲ್ಯಾಂಡ್‍ಲಾರ್ಡ್ ಒಂದು ಕಥೆ..ಹಲವು ವಿಚಾರಗಳು

Spread the love

80,90 ದಶಕದಲ್ಲಿ ಕೋಲಾರ ಭಾಗದಲ್ಲಿ ನಡೆಯುವ ಕಲ್ಪನೆಯ ಕಥೆಯಾಗಿದೆ. ಇಲ್ಲಿ ಕಲ್ಪನೆ ಅನ್ನುವುದಕ್ಕಿಂತ
ನಿಜ ಅನ್ನಿಸುವಷ್ಟು ನೈಜವಾಗಿದೆ.ಜಡೇಜ್ ಚಿತ್ರವನ್ನು ಅತ್ಯಂತ ಅದ್ಬುತವಾಗಿ ನಿರೂಪಿಸಿದ್ದಾರೆ. ಇಂದಿರಾ ಕನಸು, ಗಾಂಧಿ ಹೋರಾಟ ಮತ್ತು ಅಂಬೇಡ್ಕರ್ ಸಂವಿಧಾನ ಮದ್ಯ ಕಥೆ ಸಾಗುತ್ತದೆ. ಜಮೀನ್ದಾರ ದರ್ಪವನ್ನು ರಾಜ್ ಬಿ ಶೆಟ್ಟಿ, ರೈತನಾಗಿ, ಹೋರಾಟಗಾರನಾಗಿ, ಭೂಮಿಗಾಗಿ ನಿಂತ ವಿಜಯ, ಅವರ ಸತಿಯಾಗಿ ರಚಿತಾ ರಾಮ್, ತಾಯಿ ಪಾತ್ರದಲ್ಲಿ ಉಮಾಶ್ರೀ ಅಭಿನಯಗಳು ಅದ್ಬುತವಾಗಿವೆ.ಈ ಚಿತ್ರವನ್ನು ನೋಡಬೇಕು ಅನ್ನುವಷ್ಟು ಅಭಿಪ್ರಾಯ ಬರಲು
1) ಪಾತ್ರಕ್ಕೆ ತಕ್ಕಂತೆ ಅಭಿನಯ ಮತ್ತು ವೇಷಭೂಷಣ
2) ಕಥೆ ನೈಜತೆಗೆ ಹತ್ತಿರವಾಗಿದ್ದು
3) ಭೀಮ ಅವತಾರ ಎನ್ನುವಂತೆ ವಿಜಯ ಪಾತ್ರದ ಸಿದ್ದಾಂತ
4)ನಟರ ಅರ್ಭಟವಿಲ್ಲ,ನಟನೆಯ ಅರ್ಭಟವಿದೆ.
ಕನ್ನಡ ಚಿತ್ರಗಳನ್ನು ನೋಡಬೇಕು ಅಂದ ಮೇಲೆ ಇಂತಹ ಉತ್ತಮ ಚಿತ್ರವನ್ನು ನೋಡಬೇಕು ಅನ್ನುವುದು ನನ್ನ ವಿಚಾರ.
ಇತಿಹಾಸ ಗೋತ್ತಿರುವವರಿಗೆ ಈ ಕಥೆ ಇನ್ನಷ್ಟು ಹತ್ತಿರವಾಗುತ್ತದೆ. ನಿಂಗವ್ವಾ(ರಚಿತಾ ರಾಮ್) ಪಾತ್ರವು ರಚಿತಾ ರಾಮ್‍ನ ಸಿನಿಬದುಕಿನ ಅದ್ಬುತ ಎನ್ನಲೇಬೇಕು.
ಕರಿಯ ಹೀರೋ ಆಗಿದ್ದಾನೆ, ಬಾಡಲೇ ಹೀರೋ ಆಗಿದ್ದಾನೆ ಅಂತ ಆಡಿಕೊಂಡವರ ಮುಂದೆ ಲ್ಯಾಂಡ್ ಲಾರ್ಡ್ ಮೂಲಕ ವಿಜಯ ಮತ್ತು ರಾಜ್ ಉತ್ತರ ಕೊಟ್ಟಿದ್ದಾರೆ.
ಮನುಷ್ಯನಿಗೆ ಆಗುವ ಅವಮಾನಗಳು ಸನ್ಮಾನಗಳಿಗೆ ಎಡೆಮಾಡಿಕೊಡುತ್ತವೆ.
ಕಾಲಘಟ್ಟದಲ್ಲಿ ಉರುಳುವ ಸಮಯದಲ್ಲಿ ಒಮ್ಮೆ ಲ್ಯಾಂಡ್ ಲಾರ್ಡ್ ನೋಡಿ.

Leave a Reply

Your email address will not be published. Required fields are marked *