‘ವೈಕುಂಠ ಸಮಾರಾಧನೆ’ ಸಿನಿಮಾ: ಪ್ರಮುಖ ಪಾತ್ರದಲ್ಲಿ ರಜತ್ ಮೌರ್ಯ ನಟನೆ

Spread the love

ಪೋಸ್ಟರ್ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿರುವ ವೈಕುಂಠ ಸಮಾರಾಧನೆ ಚಿತ್ರದಲ್ಲಿ ವಕೀಲ ವೃತ್ತಿಯಲ್ಲಿ ಹೆಸರು ಮಾಡಿ ಇದೀಗ ಸಿನಿಮಾ ನಿರ್ದೇಶನಕ್ಕಿಳಿದಿರುವ ರಜತ್ ಮೌರ್ಯ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ರಜತ್ ಮೌರ್ಯ ಅವರು ಬಿಡುವಿನ ವೇಳೆ ನಟನೆ, ನಿರ್ದೇಶನದ ತರಬೇತಿ ಪಡೆದುಕೊಂಡಿದ್ದಾರೆ. ಜೊತೆಗೆ ಮಾಡೆಲ್ ಆಗಿದ್ದು, ಇವರ ಅಭಿನಯದ ಜಾಹಿರಾತುಗಳು ಐಪಿಎಲ್ ಪಂದ್ಯಗಳಲ್ಲಿ ಸ್ಟ್ರೀಮಿಂಗ್ ಆಗಿದೆ. ಇದರ ಅನುಭವದಿಂದಲೇ ಸಿನಿಮಾಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ವೈಕುಂಠ ಸಮಾರಾಧನೆ ಪತ್ರಿಕೆ ರೀತಿಯಲ್ಲಿಯೇ ಚಿತ್ರದ ಪೋಸ್ಟರ್ ಕಪ್ಪು ಬಿಳುಪಿನಲ್ಲಿ ಸಿದ್ದಗೊಂಡಿದ್ದು, ಜನನ, ಮರಣ ಇರುವಂತೆ ಇದರಲ್ಲಿ ಮುಹೂರ್ತ 10.8.24 ರಿಲೀಸ್ 12.12.25 ದಿನಾಂಕವನ್ನು ನೀಡಲಾಗಿದೆ. ಈಗಾಗಲೇ ಡೆತ್ ಲುಕ್ ಪೋಸ್ಟರ್ ರೀಲ್ಸ್ ವೈರಲ್ ಆಗಿದ್ದು, ಎಲ್ಲಾ ಕಡೆ ಸದ್ದು ಮಾಡುತ್ತಿದೆ.ಚಿತ್ರಕ್ಕೆ ನನ್ನ ಕುಟುಂಬವೇ ಸ್ಫೂರ್ತಿ. ತಂದೆ-ತಾಯಿ ಮತ್ತು ನನ್ನ ಅಜ್ಜನೊಂದಿಗಿನ ನನ್ನ ಬಾಲ್ಯದ ದಿನಗಳಿಂದ ಚಿತ್ರದ ಕಥೆ ಬರೆಯಲಾಗಿದೆ. ಕಥೆಯಲ್ಲಿ ಭಾವನೆ, ಮನರಂಜನೆ, ಕೌಟುಂಬಿಕ ನಾಟಕ, ಪ್ರಣಯ, ಸಸ್ಪೆನ್ಸ್ ಮತ್ತು ಗ್ರಾಮೀಣ ಮತ್ತು ನಗರದ ಅಂಶಗಳನ್ನು ಮಿಶ್ರಣ ಮಾಡಲಾಗಿದೆ. ಪಾತ್ರಧಾರಿಗಳ ಕುರಿತ ನಿರ್ಧಾರ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ರಜತ್ ಅವರು ಹೇಳಿದ್ದಾರೆ.

ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿರಲಿಲ್ಲು, ಆಕ್ಷನ್ ಸೀಕ್ವೆನ್ಸ್ ಇರಲಿದೆ. ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಅವರ ಸಂಗೀತ ಸಂಯೋಜನೆ ಮತ್ತು ಹರ್ಷಿತ್ ಬಿ ಗೌಡ ಅವರ ಛಾಯಾಗ್ರಹಣವಿದೆ. ಚಿತ್ರದ ಶೇ.60ರಷ್ಟು ಭಾಗವನ್ನು ಪಶ್ಚಿಮ ಘಟ್ಟಗಳಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಉಳಿದ ಭಾಗವನ್ನು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *