ಯಜಮಾನ’ ಧಾರಾವಾಹಿಗೆ ಹೊಸ ಎಂಟ್ರಿ: ಬಂದೇಬಿಟ್ರು ‘ಬಿಗ್ ಬಾಸ್’ ಯಮುನಾ ಶ್ರೀನಿಧಿ

Spread the love
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಯಜಮಾನ’ ಸೀರಿಯಲ್‌ನಲ್ಲಿ ಹೊಸ ಕ್ಯಾರೆಕ್ಟರ್‌ ಎಂಟ್ರಿಯಾಗಿದೆ. ಅದೇ ಸುಮಿತ್ರಾ. ಈ ಸುಮಿತ್ರಾ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವವರು ಯಾರು ಗೊತ್ತಾ? ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಯಮುನಾ ಶ್ರೀನಿಧಿ.!

ಬಿಗ್ ಬಾಸ್ ಕನ್ನಡ ಸೀಸನ್ 11′ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಜನಪ್ರಿಯತೆ ಪಡೆದ ನಟಿ ಯಮುನಾ ಶ್ರೀನಿಧಿ. ‘ಯುವರತ್ನ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ ಯಮುನಾ ಶ್ರೀನಿಧಿ ‘ಬಿಗ್ ಬಾಸ್ ಕನ್ನಡ 11’ ಶೋನಲ್ಲಿ ಮೊದಲ ವಾರವೇ ಎವಿಕ್ಟ್ ಆಗಿಬಿಟ್ಟರು. ಇದೀಗ ‘ಯಜಮಾನ’ ಧಾರಾವಾಹಿಯ ಬಹುಮುಖ್ಯ ಪಾತ್ರದಲ್ಲಿ ಯಮುನಾ ಶ್ರೀನಿಧಿ ನಟಿಸುತ್ತಿದ್ದಾರೆ. ‘ಯಜಮಾನ’ ಸೀರಿಯಲ್‌ನಲ್ಲಿ ಹೊಸ ಪಾತ್ರದ ಎಂಟ್ರಿಯಾಗಿದ್ದು, ಆ ಪಾತ್ರಕ್ಕೆ ಯಮುನಾ ಶ್ರೀನಿಧಿ ಬಣ್ಣ ಹಚ್ಚಲಿದ್ದಾರೆ.

Leave a Reply

Your email address will not be published. Required fields are marked *