ನಕಲಿ ಜನರು ಮುಖವಾಡ ಹಾಕೊಂಡು ಬದುಕ್ತಾರೆ: ಏನಿದರ ಅರ್ಥ? ಭಾರೀ ಸದ್ದು ಮಾಡುತ್ತಿದೆ ರಚಿತಾ ರಾಮ್ ಪೋಸ್ಟ್

Spread the love

ಸ್ಯಾಂಡಲ್ ವುಡ್’ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಮಾಡಿರುವ ಪೋಸ್ಟ್ ವೊಂದು ಸಾಕಷ್ಟು ಸುದ್ದಿ ಮಾಡುತ್ತಿದೆ.

‘Fake people have an image to maintain. Real people just don’t care’ ಎಂದು ರಚಿತಾ ರಾಮ್ ಪೋಸ್ಟ್ ಹಾಕಿದ್ದಾರೆ. ಇದರ ಅರ್ಥ ‘ಮುಖವಾಡ ಹಾಕಿದ ಜನರು (ಫೇಕ್ ಜನರು) ವರ್ಚಸ್ಸನ್ನು ಕಾಯ್ದುಕೊಳ್ಳಬೇಕು. ಆದರೆ, ನಿಜವಾದವರು ಡೋಂಟ್ ಕೇರ್ ಎನ್ನುತ್ತಾರೆ’ ಎಂಬರ್ಥ ಬರುವಂತೆ ಪೋಸ್ಟ್ ಮಾಡಿದ್ದಾರೆ. ಇದು ಸಾಕಷ್ಟು ಗಮನ ಸೆಳೆದಿದೆ. ರಚಿತಾ ರಾಮ್ ಯಾವ ಕಾರಣಕ್ಕೆ ಹಾಗೂ ಯಾವ ವ್ಯಕ್ತಿಯನ್ನು ಇಟ್ಟುಕೊಂಡು ಈ ರೀತಿ ಹೇಳಿದ್ದಾರೆಂಬುದು ಹಲವರನ್ನು ಕಾಡುತ್ತಿದೆ.ಈ ಮೊದಲು ರಚಿತಾ ರಾಮ್ ಅವರು ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದರು. ಆ ಬಳಿಕ ಅವರು ಕಣ್ಣೀರು ಹಾಕಿದ್ದರು. ಈ ವಿಚಾರಕ್ಕೆ ಕೆಲವರು ಅವರನ್ನು ಟೀಕೆ ಕೂಡ ಮಾಡಿದ್ದರು. ಇದಲ್ಲದೆ, ಹೊಸ ಚಿತ್ರದ ಮುಹೂರ್ತದಲ್ಲಿ ಕಾಣಿಸಿಕೊಂಡಿದ್ದರ ಕುರಿತು ಟೀಕೆ ಮಾಡಿದ್ದರು.

ಜಮೀರ್ ಪುತ್ರ ಝೈದ್ ಖಾನ್‌ ಜೊತೆ ದೊಡ್ಡ ಬಜೆಟ್ ಸಿನಿಮಾ ಶುರು ಮಾಡುತ್ತಿರುವುದಕ್ಕೆ ಬೇಸರ ಆಗುತ್ತಿಲ್ಲವೇ? ದಾಸ ಕಷ್ಟದಲ್ಲಿ ಇದ್ದರೆ ನಿಮ್ಮ ದುಡಿಮೆ ನೋಡಿಕೊಳ್ಳುತ್ತಿದ್ದೀರಾ ಎಂದು ಕೆಲವರು ಹೇಳಿದ್ದರು.

Leave a Reply

Your email address will not be published. Required fields are marked *