‘ದೇವರ’ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ಗೆ ಜಾನ್ವಿ ಕಪೂರ್ ಅವರು ಜೊತೆಯಾಗಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 27ರಂದು ರಿಲೀಸ್ ಆಗಲಿದೆ. ಅದಕ್ಕೂ ಮೊದಲು ‘ಸ್ವಾತಿಮುತ್ತೇ ಸಿಕ್ಕಂಗೈತೆ..’ ರೊಮ್ಯಾಂಟಿಕ್ ಹಾಡು ಎಲ್ಲರ ಗಮನ ಸೆಳೆಯುತ್ತಿದೆ.
ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ರಿಲೀಸ್ಗೆ ಬಾಕಿ ಇರೋದು ಇನ್ನು ಕೆಲವೇ ವಾರಗಳು ಮಾತ್ರ. ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅದ್ಧೂರಿ ಬಜೆಟ್‌ನ ಈ ಪ್ಯಾನ್ ಇಂಡಿಯಾ ಸಿನಿಮಾಗೆ ಈಗ ಪ್ರಚಾರ ಆರಂಭಿಸಲಾಗಿದೆ. ಈ ಚಿತ್ರದ ಎರಡನೇ ಹಾಡನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿದೆ. ಈ ಹಾಡು ಕನ್ನಡದಲ್ಲೂ ಇದ್ದು ಕೇಳುಗರಿಗೆ ಇಷ್ಟವಾಗಿದೆ. ಜೂನಿಯರ್ ಎನ್ಟಿಆರ್ ಹಾಗೂ ಜಾನ್ವಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.ದೇವರ’ ಸಿನಿಮಾಗೆ ಖ್ಯಾತ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ ‘ದೇವರ’ ತಂಡದಿಂದ ‘ಫಿಯರ್..’ ಹಾಡು ಬಿಡುಗಡೆಯಾಗಿದೆ. ಆ ಹಾಡಿನ ಮೂಲಕ ಪ್ರಚಾರ ಕೆಲಸ ಆರಂಭಿಸಿದ್ದ ಚಿತ್ರತಂಡ ಇದೀಗ ಎರಡನೇ ಹಾಡು ಬಿಡುಗಡೆ ಮಾಡಿದೆ. ಶಿಲ್ಪಾ ರಾವ್ ಕಂಠಸಿರಿಯಲ್ಲಿ ‘ಸ್ವಾತಿಮುತ್ತೇ ಸಿಕ್ಕಂಗೈತೆ..’ ರೊಮ್ಯಾಂಟಿಕ್ ಹಾಡು ಎಲ್ಲರ ಗಮನ ಸೆಳೆಯುತ್ತಿದೆ