ಬಹು ನಿರೀಕ್ಷಿತ ಹಾಸ್ಯಭರಿತ ಚಿತ್ರ “ಪೌಡರ್” ಟ್ರೇಲರ್ ಅನ್ನು ಇಂದು ಘೋಷಣೆ ಮಾಡಿದೆ. ಇದೇ ಆಗಸ್ಟ್ 7ರಂದು ಬೆಳಿಗ್ಗೆ 11:11 ಗಂಟೆಗೆ ಟ್ರೇಲರ್ ಬಿಡುಗಡೆ ಮಾಡಿವುದಾಗಿ ಚಿತ್ರ ತಂಡ ಘೋಷಿಸಿದೆ. ಈ ಹಿಂದೆ “ಪೌಡರ್” ತಂಡ ಬಿಡುಗಡೆ ಮಾಡಿದ ಟೀಸರ್ ಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದ್ದು, ಇನ್ನು ಮುಂಬರುವ ಟ್ರೇಲರ್ ಅನ್ನು ವೀಕ್ಷಿಸಲು ಸಿನಿ ಪ್ರೇಕ್ಷಕರು ಕುತೂಹಲದಿಂದ ಕಾಯುವಂತೆ ಮಾಡಿದೆ.
ಜನಾರ್ದನ್ ಚಿಕ್ಕಣ್ಣ ಅವರ ನಿರ್ದೇಶನದ “ಪೌಡರ್” ಒಂದು ಹಾಸ್ಯಭರಿತ ಚಿತ್ರವಾಗಿದ್ದು ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರವಿಶಂಕರ್ ಗೌಡ,ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿರುತ್ತಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರವನ್ನು ಕಾರ್ತಿಕ್ ಗೌಡ,ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್.ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ. “ಪೌಡರ್” ಚಿತ್ರ ಇದೇ ಆಗಸ್ಟ್ 23ರಂದು ತೆರೆ ಕಾಣಲಿದೆ.