ಇಂದ್ರಜಿತ್ ಲಂಕೇಶ್ ತಮ್ಮ ನಿರ್ದೇಶನದ ಗೌರಿ ಸಿನಿಮಾ ಮೂಲಕ ಪುತ್ರ ಸಮರ್ಜಿತ್ ನನ್ನುಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಇದುವರೆಗೂ ಪ್ರಮುಖ ಪಾತ್ರಗಳ ಬಗ್ಗೆ ನಿರ್ದೇಶಕರು ಎಲ್ಲಿಯೂ ತುಟಿ ಬಿಚ್ಚಿರಲಿಲ್ಲ.
ಗೌರಿ ಸಿನಿಮಾದ ಹೊಸ ಅಪ್ ಡೇಟ್ ಪ್ರಕಾರ ಸಿದ್ಲಿಂಗು ನಟ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇಂದ್ರಜಿತ್ ಮತ್ತು ಯೋಗಿ ಜೊತೆಗಿರುವ ಫೋಟೋ ಹಲವು ಊಹಾ ಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಗೌರಿ ಸಿನಿಮಾ ಸ್ವಾತಂತ್ರ್ಯ ದಿನಾಚರಣೆಯಂದು ರಿಲೀಸ್ ಆಗಲಿದೆ. ಸಾನ್ಯಾ ಅಯ್ಯರ್ ನಾಯಕಿಯಾಗಿ ಅಭಿನಯಿಸಿದ್ದಾರೆ.
ನೈಜ ಘಟನೆಗಳಿಂದ ಪ್ರೇರಿತರಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿನಿಮಾಗೆ ತಮ್ಮ ಸಹೋದರಿ ಗೌರಿ ಹೆಸರನ್ನು ಇಟ್ಟಿದ್ದಾರೆ. ಗೌರಿ ಪ್ರಮುಖ ಪಾತ್ರಗಳಲ್ಲಿ ಸ್ವೀಜಲ್ ಮತ್ತು ಚಂದು ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ. ‘ಟೈಮ್ ಬರುತ್ತೆ,’ ‘ಧೂಳ್ ಎಬ್ಬಿಸುವ ,’ ಮತ್ತು ‘ಮುದ್ದಾದ’ ಅಂತಹ ಮೆಲೋಡಿ ಹಾಡುಗಳಿಗೆ ಜಸ್ಸಿ ಗಿಫ್ಟ್ ಮತ್ತು ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಎಜೆ ಶೆಟ್ಟಿ ನಿರ್ವಹಿಸಿದ್ದಾರೆ. ಏತನ್ಮಧ್ಯೆ, ಯೋಗಿ ಅವರು ಸಿದ್ಲಿಂಗು 2, ರೋಸಿ, ಪರಿಮಳ ಲಾಡ್ಜ್, ಆಡಿದ್ದೇ ಆಟ ಮತ್ತು ಅವರ ತಮಿಳು ಚೊಚ್ಚಲ ಚಿತ್ರ ಸೇರಿದಂತೆ ಅನೇಕ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.