ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಇನ್ನು ಅವರ ಅಭಿಮಾನಿಗಳು, ಆಪ್ತರು ಆಗಾಗ್ಗೆ ಬೇಸರ ವ್ಯಕ್ತಪಡಿಸುತ್ತಿರುತ್ತಾರೆ. ಇಂದು ರಕ್ಷಾ ಬಂಧನ ಹಿನ್ನೆಲೆಯಲ್ಲಿ ನಟಿ ಸೋನಲ್ ಮೊಂಥೆರೋ ದರ್ಶನ್‌ಗೆ ಶುಭಾಶಯ ಕೋರಿದ್ದಾರೆ. ರಕ್ಷಾ ಬಂಧನದ ಸಮಯದಲ್ಲಿ ಅಣ್ಣನ ನೆನೆದು ಭಾವುಕ ಪೋಸ್ಟ್ ಬರೆದಿದ್ದಾರೆ.
ನಟಿ ಸೋನಲ್ ಇತ್ತೀಚೆಗಷ್ಟೆ ನಿರ್ದೇಶಕ ತರುಣ್ ಸುಧೀರ್ ಅವರನ್ನು ವಿವಾಹವಾಗಿದ್ದರು. ಇನ್ನು ತರುಣ್ ಸುಧೀರ್ ಸಹ ಮೊದಲಿನಿಂದಲೂ ದರ್ಶನ್ ಗೆ ಅತ್ಯಾಪ್ತರಾಗಿದ್ದಾರೆ. ಕಳೆದ ವರ್ಷದ ದರ್ಶನ್ ಗೆ ರಾಖಿ ಕಟ್ಟಿ ಸಂಭ್ರಮಿಸಿದ್ದ ಸೋನಲ್ ಈ ಬಾರಿ ದರ್ಶನ್ ಹೊರಗೆ ಇಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಶೇಷ ದಿನದಂದು ನಾವು ಜತೆಗೆ ಇಲ್ಲದೆ ಇದ್ದರೂ, ನಮ್ಮಿಬ್ಬರ ಆತ್ಮೀಯತೆ ಎಂದೂ ಮರೆಯಾಗುವುದಿಲ್ಲ. ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಾನು ನಿಮ್ಮನ್ನು ಪ್ರೀತಿಸುತ್ತೇವೆ Bro ಎಂದು ಸೋನಲ್ ಮೊಂಥೆರೋ ಪೋಸ್ಟ್ ಮಾಡಿದ್ದಾರೆ.ದರ್ಶನ್ ಅಭಿನಯದ ರಾಬರ್ಟ್ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸೋನಲ್ ಸಹ ನಟಿಸಿದ್ದರು. ಅಂದಿನ ಪರಿಚಯ ಈಗಲೂ ಉತ್ತಮವಾಗಿಯೇ ಇದೆ. ಇವರಿಬ್ಬರ ನಡುವೆ ಅಣ್ಣ-ತಂಗಿ ಸಂಬಂಧವಿದೆ. ಇದೀಗ ರಕ್ಷಾ ಬಂಧನದ ಶುಭ ಸಮಯದಲ್ಲಿ ತನ್ನ ಸಹೋದರ ಹೊರಗೆ ಇಲ್ಲದಿರುವುದು ನಟಿಗೆ ನೋವು ತಂದಿದೆ.