ನವದೆಹಲಿ: IC 814 ವೆಬ್ ಸೀರೀಸ್ ನ ಕಂಟೆಂಟ್ ವಿವಾದಕ್ಕೆ ಸಂಬಂಧಿಸಿದಂತೆ ಒಟಿಟಿ ದೈತ್ಯ Netflix India ತನ್ನ ತಪ್ಪನ್ನು ಸರಿಪಡಿಸುವುದಾಗಿ ಭಾರತ ಸರ್ಕಾರಕ್ಕೆ ಭರವಸೆ ನೀಡಿದೆ.
IC-814- ದಿ ಕಂದಹಾರ್ ಹೈಜಾಕ್ ಕುರಿತ ವೆಬ್ ಸೀರೀಸ್ ನಲ್ಲಿ ಹೈಜಾಕ್ ಮಾಡಿದವರನ್ನು ಚಿತ್ರಿಸಿದ ರೀತಿ ವಿವಾದಕ್ಕೀಡಾಗಿರುವ ಹಿನ್ನೆಲೆಯಲ್ಲಿ Netflix India ಮುಖ್ಯಸ್ಥರಿಗೆ ಭಾರತ ಸರ್ಕಾರ ಸಮನ್ಸ್ ಜಾರಿ ಮಾಡಿತ್ತು.ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿದ್ದ Netflix India ಮುಖ್ಯಸ್ಥರು ಕಂಟೆಂಟ್ ನ್ನು ಪರಿಷ್ಕರಿಸುವುದಾಗಿ ಹೇಳಿದ್ದು, ದೇಶದ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಕಂಟೆಂಟ್ ಇರಲಿದೆ ಎಂಬ ಭರವಸೆ ನೀಡಿದ್ದಾರೆ.
ಈ ವೆಬ್ ಸೀರೀಸ್ ನ್ನು ಅನುಭವ್ ಸಿನ್ಹಾ ನಿರ್ದೇಶಿಸಿದ್ದಾರೆ. ಆಗಸ್ಟ್ 29 ರಂದು ಬಿಡುಗಡೆಯಾದ ವೆಬ್ ಸೀರೀಸ್ ನಲ್ಲಿ ಅಪಹರಣಕಾರರ ಹೆಸರನ್ನು “ಭೋಲಾ” ಮತ್ತು “ಶಂಕರ್” ಎಂದು ಬದಲಾಯಿಸಲಾಗಿದೆ. ಈ ಹೆಸರುಗಳು ಸಾಂಪ್ರದಾಯಿಕವಾಗಿ ಭಗವಾನ್ ಶಿವನೊಂದಿಗೆ ಸಂಬಂಧಿಸಿದ್ದಾಗಿದೆ.