ಯುವ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಯುವನಟ ಹಾಗೂ ನಿರ್ಮಾಪಕ. ಇವರು ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ. ಇವರು ೧೯೯೩ರ ಏಪ್ರಿಲ್ ೨೩ರಂದು ಜನಿಸಿದರು. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಇವರು ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದಿದ್ದಾರೆ.
ಇವರು ಡಾ.ರಾಜ್‌ಕುಮಾರ್ ಅವರ ಹೆಸರಿನಲ್ಲಿ ನಾಗರಿಕ ಸೇವಾ ಪರೀಕ್ಷಾ ತರಬೇತಿ ಕೇಂದ್ರವನ್ನು ಮುನ್ನೆಡುಸುತ್ತಿದ್ದಾರೆ. ಇದರ ಜೊತೆಗೆ 2016ರಲ್ಲಿ ತೆರೆಕಂಡ ವಿನಯ್ ರಾಜ್‌ಕುಮಾರ್ ಅಭಿನಯದ `ರನ್ ಆಂಟನಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಹೆಸರು ಬದಲಾವಣೆ: ಯುವ ರಾಜ್‌ಕುಮಾರ್ ಅವರ ಮೊದಲ ಹೆಸರು ಗುರು ರಾಜ್‌ಕುಮಾರ್. ಕನ್ನಡ ಚಿತ್ರರಂಗ ಪ್ರವೇಶಿಸುವ ಮೊದಲು ಅದನ್ನು ಯುವ ರಾಜ್‌ಕುಮಾರ್ ಅಂತ ಬದಲಿಸಿಕೊಂಡರು.
ಮದುವೆ
ಯುವ ರಾಜ್‌ಕುಮಾರ್ 2019 ಮೇ 26ರಂದು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಶ್ರೀದೇವಿ ಭೈರಪ್ಪ ಎಂಬುವವರನ್ನು ಮದುವೆಯಾದರು. ಶ್ರೀದೇವಿ ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರು. ಇವರಿಬ್ಬರು ಏಳು ವರ್ಷಗಳಿಂದ ಪರಸ್ಪರ ಸ್ನೇಹಿತರಾಗಿದ್ದರು. ಈ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾದರು. ವಿನಯ್ ರಾಜ್‌ಕುಮಾರ್ ಅವರ ‘ರನ ಆಂಟನಿ’ ಸಿನಿಮಾ ಪ್ರಚಾರ ಕಾರ್ಯಗಳಲ್ಲಿ ಶ್ರೀದೇವಿ ಭಾಗಿಯಾಗಿದ್ದರು.
ಸಿನಿಮಾ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಉತ್ತಾರಾಧಿಕಾರಿ ಅಂತಲೇ ಬಿಂಬಿತರಾಗಿರುವ ಯುವ ರಾಜ್‌ಕುಮಾರ್ ‘ಯುವ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.
ವಿಚ್ಛೇದನ: 2019 ಮೇ 26ರಂದು ಶ್ರೀದೇವಿ ಭೈರಪ್ಪ ಮದುವೆಯಾಗಿದ್ದ ಯುವ ರಾಜ್‌ಕುಮಾರ್, ಜೂನ್ 6ರಂದು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜುಲೈ 4ರಂದು ಈ ಕುರಿತು ವಿಚಾರಣೆ ನಡೆಯಲಿದೆ. MC ಆಕ್ಟ್ ಸೆಕ್ಷನ್ 13(1)(IA) ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕಳೆದ 6 ತಿಂಗಳಿಂದ ದಂಪತಿ ದೂರಾಗಿ ಜೀವನ ನಡೆಸುತ್ತಿದ್ದಾರೆ.