ದುನಿಯಾ ವಿಜಯ್ ಕನ್ನಡ ಚಿತ್ರರಂಗದ ಖ್ಯಾತ ನಟ. ಇವರು 1974ರ ಜನವರಿ 20ರಂದು ಬೆಂಗಳೂರಿನಲ್ಲಿ ಜನಿಸಿದರು. ಬಡ ಕುಟುಂಬದಲ್ಲಿ ಬೆಳೆದು ಬಂದ ಇವರಿಗೆ ಬಾಲ್ಯದಿಂದಲೂ ಸಿನಿಮಾದಲ್ಲಿ ನಟಿಸುವ ಆಸೆಯಿತ್ತು. ಅದರಂತೆ ಕೆಲ ಸಿನಿಮಾಗಳಲ್ಲಿ ಚಿಕ್ಕ-ಚಿಕ್ಕ ಪಾತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.
ವೃತ್ತಿಜೀವನ
ಕಿಚ್ಚ ಸುದೀಪ್ ಅಭಿನಯದ ರಂಗ ಎಸ್‌ಎಸ್‌ಎಲ್‌ಸಿ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ವಿಜಯ್ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ನಂತರ ಮೊನಲಿಸಾ, ರಿಷಿ, ರಾಕ್ಷಸ, ಜೋಗಿ, ಡೆಡ್ಲಿ, ಶ್ರೀ, ಕಲ್ಲಾರಳಿ ಹೂವಾಗಿ, ಅಂಬಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಚಿಕ್ಕ-ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡರು.
ನಂತರ 2007ರಲ್ಲಿ ಸೂರಿ ಅವರ ನಿರ್ದೇಶನದಲ್ಲಿ ಮೂಡಿಬಂದ ‘ದುನಿಯಾ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದರು. ಈ ಚಿತ್ರ ಬ್ಲಾಕ್‌ಬಸ್ಟರ್ ಆಗುವುದರ ಜೊತೆಗೆ ವಿಜಯ್‌ಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಈ ಸಿನಿಮಾದ ಅದ್ಭುತ ನಟನೆಯಿಂದ ‘ದುನಿಯಾ’ ವಿಜಯ್ ಎಂದೇ ಚಿರಪರಿಚಿತರಾದರು. ಜೊತೆಗೆ ಅತ್ಯುತ್ತಮ ನಟ ಫಿಲ್ಮಫೇರ್ ಪ್ರಶಸ್ತಿ ಕೂಡ ಪಡೆದರು.
ನಂತರ ಇವರಿಗೆ ಅನೇಕ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸುವ ಅವಕಾಶಗಳು ಬಂದವು. ಬಳಿಕ ಚಂಡ, ಜರಾಸಂಧ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಕನಕ, ದನ ಕಾಯೋನು, ಜಾಕ್ಸನ್ ಮಾಸ್ತಿಗುಡಿ, ದಕ್ಷ, ಸಿಂಹಾದ್ರಿ, ಜಯಮ್ಮನ ಮಗ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.
ನಿರ್ದೇಶನ
2021ರಲ್ಲಿ ಸಿನಿಮಾ ನಿರ್ದೇಶನಕ್ಕಿಳಿದ ದುನಿಯಾ ವಿಜಯ್, ಸಲಗಎಂಬ ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆನಂತರ ಭೀಮಾ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದಾರೆ.