ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟ. ಇವರು 1988ರ ಅಕ್ಟೋಬರ್ 06 ಬೆಂಗಳೂರಿನಲ್ಲಿ ಜನಿಸಿದರು. ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಇವರ ಹಿರಿಯ ಸಹೋದರ ಹಾಗೂ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಇವರ ಚಿಕ್ಕಪ್ಪ.
ಸಿನಿಮಾರಂಗ
ಚಿಕ್ಕಪ್ಪ ಅರ್ಜುನ್ ಸರ್ಜಾ ಸಲಹೆಯಂತೆ ನಟನಾ ತರಬೇತಿ ಪಡೆದ ಧ್ರುವ, ನಿರ್ದೇಶಕ A.P ಅರ್ಜುನ್ ಅವರ ‘ಅದ್ಧೂರಿ‘ ಚಿತ್ರಕ್ಕಾಗಿ ನಡೆಸಿದ ಅಡಿಷನ್‌ನಲ್ಲಿ ಆಯ್ಕೆಯಾದರು. ಅದರಂತೆ 2012ರಲ್ಲಿ ತೆರೆಕಂಡ ‘ಅದ್ಧೂರಿ’ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು.
ಆನಂತರ 2013ರಲ್ಲಿ ಬಿಡುಗಡೆಗೊಂಡ ‘ಬಹುದ್ಧೂರ್’ ಚಿತ್ರದಲ್ಲಿ ರಾಧಿಕಾ ಪಂಡಿತ್ ಜೊತೆಯಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡು ಯಶಸ್ಸು ಕಂಡರು. 2017ರಲ್ಲಿ ತೆರೆಗೆ ಬಂದ ‘ಭರ್ಜರಿ’ ಚಿತ್ರ ಕೂಡ ಶತದಿನ ಪೂರೈಸಿತು. ಧ್ರುವ ಸರ್ಜಾ ನಟಿಸಿದ ಮೊದಲ ಮೂರು ಚಿತ್ರಗಳು ಮೆಗಾ ಹಿಟ್ ಆಗಿವೆ. ಆನಂತರ ಪೊಗರು ಸಿನಿಮಾದಲ್ಲಿ ನಟಿಸಿದರು.
ಮದುವೆ: ಧ್ರುವ ಸರ್ಜಾ 2019ರಲ್ಲಿ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಅವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.