ಉತ್ತಮ ಪಾತ್ರ ಮತ್ತು ಗುಣಮಟ್ಟದ ಚಿತ್ರಗಳ ಮಹತ್ವ ಅರಿತಿದ್ದೇನೆ: ನಟಿ ಮೇಘಾ ಶೆಟ್ಟಿ

Spread the love

‘ಕೈವ’ ಸಿನಿಮಾದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿ ಮೇಘಾ ಶೆಟ್ಟಿ ಬ್ಯುಸಿಯಾಗಿದ್ದಾರೆ. ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿನ್ನೆಯಷ್ಟೇ ಮೇಘಾ ಶೆಟ್ಟಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಹುಟ್ಟುಹಬ್ಬದ ಪ್ರಯುಕ್ತ ಅವರ ಹೊಸ ಸಿನಿಮಾಗಳ ಫಸ್ಟ್ ಲುಕ್ ರಿವೀಲ್ ಆಗಿದೆ.

ಅದರಂತೆಯೇ ವಿಜಯ್ ರಾಜ್‍ಕುಮಾರ್ ನಟನೆಯ ಗ್ರಾಮಾಯಣ, ಪ್ರಜ್ವಲ್ ದೇವರಾಜ್ ನಟನೆಯ ಚೀತಾ ಹಾಗೂ ಆಪರೇಷನ್ ಲಂಡನ್ ಕೆಫೆ ಸಿನಿಮಾಗಳ ಫಸ್ಟ್ ಲುಕ್ ಗಮನ ಸೆಳೆಯುತ್ತಿವೆ.

ಮೇಘಾ ಶೆಟ್ಟಿ 2019ರಲ್ಲಿ ಜೊತೆ ಜೊತೆಯಲಿ ಸೀರಿಯಲ್​ ಮೂಲಕ ಜನರ ಮನಗೆದ್ದಿದ್ದರು. ಬಳಿಕ ಟ್ರಿಪಲ್​ ರೈಡಿಂಗ್​, ದಿಲ್ಪಸಂದ್​ ನಂತರ ಕೈವ ಸಿನಿಮಾದಲ್ಲಿ ನಟಿಸಿ, ಪ್ರೇಕ್ಷಕರ ಮನಗೆದ್ದಿದ್ದರು. ಸದ್ಯ ಮೇಘಾ ಶೆಟ್ಟಿ ಕೈಯಲ್ಲಿ ಮೂರು ಸಿನಿಮಾಗಳಿವೆ.

ಚೀತಾ’ ಚಿತ್ರದಲ್ಲಿ ಮೇಘಾ ಸಖತ್‌ ರಗಡ್‌ ಆಗಿ ಕಾಣಿಸಿಕೊಂಡಿದ್ದು, ಲಂಡನ್‌ ಕೆಫೆಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ. “ಚೀತಾ’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ ನಾಯಕರಾಗಿ ನಟಿಸಿದ್ದಾರೆ.ಆಪರೇಶನ್‌ ಲಂಡನ್‌ ಕೆಫೆ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದ್ದು, ಕನ್ನಡ, ಮರಾಠಿ, ಹಿಂದಿ, ತಮಿಳು ತೆಲುಗು, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಇದೊಂದು ಮಾಸ್‌ ಆ್ಯಕ್ಷನ್‌ ಚಿತ್ರವಾಗಿದ್ದು, ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ತೊಡಗಿದೆ.

ಈ ಮೂರು ಚಿತ್ರಗಳಲ್ಲಿ ಬಲವಾದ ಪಾತ್ರಗಳಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಹೊಸ ಪಾತ್ರದ ಮೂಲಕ ಜನರ ಮುಂದೆ ಬರಲು ಸಾಕಷ್ಟು ಕಾತುರಳಾಗಿದ್ದೇನೆಂದು ಮೇಘಾ ಶೆಟ್ಟಿ ಹೇಳಿದ್ದಾರೆ.

ಕಿರುತೆರೆಯಿಂದ ಹಿರಿತೆರೆ ಕಣ್ಣು ತೆರೆಸುವ ಅನುಭವವಾಗಿದೆ. ಈ ಹಂತದಲ್ಲಿ ಉತ್ತಮ ಪಾತ್ರ, ಗುಣಮಟ್ಟದ ಚಿತ್ರಗಳ ಮಹತ್ವವನ್ನು ಅರಿತಿದ್ದೇನೆ. ನನ್ನ ಪಾತ್ರ ಹಾಗೂ ಚಿತ್ರಗಳ ಆಯ್ಕೆಯಲ್ಲಿ ಸೆಲೆಕ್ಟಿವ್ ಆಗಿದ್ದೇನೆ. ಗ್ರಾಮಾಯಣ ಹಾಗೂ ಚೀತಾ ಕೂಡ ಇದೇ ರೀತಿ ಆಯ್ಕೆಯಾಗಿದೆ. ಬಲವಾದ ವಿಷಯಗಳು ಹಾಗೂ ಚಿತ್ರ ಜನರನ್ನು ಚಿತ್ರಮಂದಿರದತ್ತ ಸೆಳೆಯುತ್ತವೆ ಎಂದು ತಿಳಿಸಿದ್ದಾರೆ.

ಮೇಘಾಶೆಟ್ಟಿಯವರು ಸ್ಯಾಂಡಲ್ ವುಡ್ ಅಷ್ಟೇ ಅಲ್ಲದೆ, ಪರಭಾಷೆಗಳ ಚಿತ್ರಗಳಲ್ಲೂ ನಟಿಸಲು ಸಜ್ಜಾಗಿದ್ದಾರೆ. ತಮ್ಮ ಪಾತ್ರಗಳನ್ನು ಅತ್ಯಂತ ಸೂಕ್ಷ್ಮವಾಗಿ ಆಯ್ಕೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *