ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಸುದ್ದಿ ಬಾಲಿವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ನಡುವಲ್ಲೇ ಊಹಾಪೋಹಗಳಿಗೆ ಅಭಿಷೇಕ್ ಬಚ್ಚನ್ ಅವರು ಸ್ಪಷ್ಟನೆ ನೀಡಿದ್ದಾರೆ.
ವಿಚ್ಛೇದನ ವದಂತಿಗಳ ನಡುವೆ ಅಭಿಷೇಕ್ ಬಚ್ಚನ್ ಅವರು ಪ್ಯಾರಿಸ್ ಗೆ ಭೇಟಿ ನೀಡಿದ್ದರು. ಈ ವೇಳೆ 2024 ರ ಒಲಿಂಪಿಕ್ಸ್ ವೀಕ್ಷಿಸಿ ಆನಂದಿಸಿದ್ದರು. ಇದೇ ವೇಳೆ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಭದಲ್ಲಿ ವಿಚ್ಛೇದನ ವದಂತಿ ಕುರಿತು ಮಾತನಾಡಿದ್ದಾರೆ.
ತಮ್ಮ ಮದುವೆಯ ಉಂಗುರವನ್ನು ತೋರಿಸಿರುವ ಅಭಿಷೇಕ್, Still Married ಎಂದು ಹೇಳಿದ್ದಾರೆ ವದಂತಿ ಕುರಿತು ಹೇಳಲು ಏನೂ ಇಲ್ಲ. ನೀವೆಲ್ಲರೂ ಸುದ್ದಿಗಳನ್ನು ಈಗಾಗಲೇ ಹೊರಹಾಕಿದ್ದೀರಿ. ಹೀಗೇಕೆ ಮಾಡುತ್ತಿದ್ದೀರಿ ಎಂದು ನನಗೆ ಅರ್ಥವಾಗಿದೆ. ನೀವು ಕೆಲವು ಸುದ್ದಿಗಳನ್ನು ಫೈಲ್ ಮಾಡಬೇಕಾಗುತ್ತದೆ. ಪರವಾಗಿಲ್ಲ, ನಾವು ಸೆಲೆಬ್ರಿಟಿಗಳು, ನಾವು ಇವೆಲ್ಲವನ್ನು ಸಹಿಸಿಕೊಳ್ಳಲೇಬೇಕು ಎಂದು ಹೇಳಿದ್ದಾರೆ.
ಅಭಿಷೇಕ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ವಿಚ್ಛೇದನದ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಕೆಲ ವಾರಗಳಿಂದ ಮುನ್ನಲೆಯಲ್ಲಿದೆ.
ಕಳೆದ ತಿಂಗಳು ಅನಂತ್ ಅಂಬಾನಿ-ರಾಧಿಕಾ ಮದುವೆ ಸಮಾರಂಭದಲ್ಲಿ ಅಭಿಷೇಕ್ ಮತ್ತು ಐಶ್ವರ್ಯಾ ಬೇರೆ ಬೇರೆಯಾಗಿ ಕಾಣಿಸಿಕೊಂಡಿದ್ದರು. ಅಭಿಷೇಕ್ ಅವರು ತಂದೆ ತಾಯಿಯ ಜೊತೆ ಮದುವೆಗೆ ಬಂದರೆ, ಐಶ್ವರ್ಯಾ ಅವರು ಮಗಳು ಆರಾಧ್ಯ ಜೊತೆ ಆಗಮಿಸಿದ್ದರು. ಇದರ ಬೆನ್ನಲ್ಲೇ ವಿಚ್ಛೇದನ ವದಂತಿ ಮತ್ತಷ್ಟು ಪುಷ್ಟಿ ಪಡೆದುಕೊಂಡಿತ್ತು.