ಕಿಚ್ಚ ಸುದೀಪ್ 51ನೇ ವರ್ಷದ ಹುಟ್ಟುಹಬ್ಬ: ಮಧ್ಯರಾತ್ರಿ ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ವಿಶ್ ಮಾಡಿದ ‘ರನ್ನ’; ವಿಡಿಯೊ ನೋಡಿ…

Spread the love

ಇಂದು ಸೆಪ್ಟೆಂಬರ್ 2 ರಂದು ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ ಅವರ 51ನೇ ಹುಟ್ಟುಹಬ್ಬ. ಅವರ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಖುಷಿಯಿಂದ ಆಚರಿಸುತ್ತಿದ್ದಾರೆ. ಬರ್ತ್​ಡೇ ದಿನ ಮಧ್ಯರಾತ್ರಿ ಯಾರೂ ಮನೆಯ ಬಳಿ ಬರಬೇಡಿ ಎಂದು ಕಿಚ್ಚ ಸುದೀಪ್ ಕೇಳಿಕೊಂಡಿದ್ದರು,

ಆದರೆ ಅವರ ಫ್ಯಾನ್ಸ್ ಇವರ ಮಾತನ್ನು ಕೇಳಿಲ್ಲ. ಬೆಂಗಳೂರಿನ ಜೆಪಿ ನಗರದಲ್ಲಿ ಇರುವ ಸುದೀಪ್ ಮನೆ ಸಮೀಪ ಫ್ಯಾನ್ಸ್ ನೆರೆದಿದ್ದಾರೆ. ಸುದೀಪ್ ಅವರು ಅನಿವಾರ್ಯವಾಗಿ ತಮ್ಮ ಪತ್ನಿ ಮತ್ತು ಮಗಳ ಜೊತೆ ಮನೆಯಿಂದ ಹೊರಬಂದು ಅಭಿಮಾನಿಗಳ ಒತ್ತಾಸೆಗೆ ಕೇಕ್ ಕತ್ತರಿಸಿದರು.

ಇದು ಅವರ ಬರ್ತ್​ಡೇ ಪ್ರಯುಕ್ತ ಸಿನಿಮಾ ತಂಡದ ಕಡೆಯಿಂದ ವಿವಿಧ ಗಿಫ್ಟ್ ಸಿಗುತ್ತಿದೆ. ಕಳೆದ ವರ್ಷ ತಮ್ಮ ಮನೆಯಲ್ಲಿ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಉಂಟಾಗಿದ್ದ ಅಡ್ಡಿಯಿಂದಾಗಿ ಈ ವರ್ಷ ಇಂದು ಬೆಂಗಳೂರಿನ ಜಯನಗರದ ಎಂಇಎಸ್ ಮೈದಾನದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ಅಭಿಮಾನಿಗಳ ಜೊತೆ ಕಳೆಯಲಿದ್ದಾರೆ.
ಹುಟ್ಟುಹಬ್ಬ ಎಂದ ಮೇಲೆ ಸಾಕಷ್ಟು ಕೇಕ್, ಹೂಮಾಲೆಗಳು ಬರುತ್ತವೆ. ಆದರೆ ಅದಕ್ಕೆ ಹಣ ಖರ್ಚು ಮಾಡಬೇಡಿ, ಅಗತ್ಯವಿರುವವರಿಗೆ ಹಣ ಸಹಾಯ ಮಾಡಿ ಎಂದು ನಟ ಕೇಳಿಕೊಂಡಿದ್ದಾರೆ. ಹುಟ್ಟುಹಬ್ಬ ನಂತರ ಸುತ್ತಮುತ್ತ ಕೇಕ್, ಹೂಮಾಲೆಗಳು ವ್ಯರ್ಥವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಈ ಹಿಂದೆ ಕಂಡು ನೊಂದಿರುವ ಕಿಚ್ಚ ಸುದೀಪ್ ಹಾರ, ತುರಾಯಿ, ಕೇಕ್ ತರಬೇಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ಹಣ ವ್ಯರ್ಥ ಮಾಡಬೇಡಿ: ನನ್ನ ಜನ್ಮದಿನದಂದು ಅಭಿಮಾನಿಗಳು ದೊಡ್ಡ ದೊಡ್ಡ ಹೂಮಾಲೆ, ಕೇಕ್ ತಂದು ಹಣ ಖರ್ಚಾಗುತ್ತದೆ. ಅಷ್ಟು ದೊಡ್ಡ ಹೂಮಾಲೆ ಧರಿಸಿದಾಗ ಕತ್ತೇ ಮುರಿದುಹೋದಂತೆ ಆಗುತ್ತದೆ. ಇದೆಲ್ಲ ಕೇವಲ ಒಂದೆರಡು ಕ್ಷಣಗಳಿಗೆ. ಆ ನಂತರ, ಹೂಮಾಲೆಗಳನ್ನು ಬಿಸಾಕಲಾಗುತ್ತದೆ, ಅದು ನಿಷ್ಪ್ರಯೋಜಕವಾಗಿ ಹೋಗುತ್ತದೆ ಎಂದು ಕಿಚ್ಚ ಸುದೀಪ್ ಹೇಳುತ್ತಾರೆ.

ಬದಲಾಗಿ, ಅದೇ ಹಣವನ್ನು ಅಗತ್ಯವಿರುವವರಿಗೆ, ಬಡವರ ಮಕ್ಕಳಿಗೆ ದಾನ ಎಂದು ಕೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *