ಆಗಸ್ಟ್ 14ರಂದು ಕನ್ನಡ ಕಲಾವಿದರ ಸಂಘದಲ್ಲಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಹೋಮ ಹವನಗಳನ್ನು ಮಾಡುವುದಕ್ಕೆ ಈ ಸಂಘ ನಿರ್ಧರಿಸಿದೆ. ಆದರೆ, ಪೂಜೆ ಮಾಡುತ್ತಿರುವ ವಿಷಯ ಹೊರ ಬೀಳುತ್ತಿದ್ದಂತೆ ಕೆಲವು ಆರೋಪಗಳನ್ನು ಮಾಡುವುದಕ್ಕೆ ಶುರು ಮಾಡಿದ್ದರು. ದರ್ಶನ್ ಬಿಡುಗಡೆಯಾಗಲಿ ಅಂತಲೇ ಈ ಹೋಮ ಹವನಗಳನ್ನು ಮಾಡಿಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.ದರ್ಶನ್ ರಿಲೀಸ್‌ಗಾಗಿ ಪೂಜೆ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿರುವ ಬೆನ್ನಲ್ಲೇ ರಾಕ್‌ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಸ್ಪಷ್ಟನೆ ನೀಡಿದ್ದಾರೆ. ಕಲಾವಿದರ ಸಂಘದಲ್ಲಿ ಪೂಜೆ ಹಾಗೂ ಹೋಮವನ್ನು ಯಾಕೆ ಮಾಡುತ್ತಿದ್ದೇವೆ ಅನ್ನೋದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ. ಅಲ್ಲದೆ ದರ್ಶನ್ ಬಿಡುಗಡೆಗಾಗಿ ಮಾಡುತ್ತಿರುವ ಹೋಮ ಅಲ್ಲ ಎಂದಿದ್ದಾರೆ.
ದರ್ಶನ್ ರಿಲೀಸ್ ಆಗಲಿ ಅಂತ ಹೋಮ ಮಾಡಿಸುವುದೇ ಆಗಿದ್ದರೆ, ಅವರ ಮನೆಯಲ್ಲಿ ಮಾಡಿಸುತ್ತಿದ್ದೆ. 100 ದೇವಸ್ಥಾನಗಳಲ್ಲಿ ಮಾಡಿಸುತ್ತಿದ್ದೆ ಎಂದು ರಾಕ್‌ಲೈನ್ ವೆಂಕಟೇಶ್ ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟಿದ್ದಾರೆ. ದಿಡೀರನೇ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ಹಿರಿಯ ನಟ ದೊಡ್ಡಣ್ಣ ಆಡಿರುವ ಮಾತಿನ ಝಲಕ್ ಹೀಗಿದೆ.